ರಂಜಿತ್‌ಸಿಂಹ ಡಿಸಲೆ ಮಹಾರಾಷ್ಟ್ರದ ಒಬ್ಬ ಭಾರತೀಯ ಶಿಕ್ಷಕ. ಅವರು 3 ಡಿಸೆಂಬರ್ 2020 ರಂದು ಘೋಷಿಸಲಾದ $1 ಮಿಲಿಯನ್ ವಾರ್ಷಿಕ ಗ್ಲೋಬಲ್ ಟೀಚರ್ ಪ್ರೈಜ್ ಪಡೆದರು. ಬೋಧನೆಗಾಗಿರುವ ನೋಬೆಲ್ ಪ್ರಶಸ್ತಿ ಎಂದು ಪತ್ರಕರ್ತರಿಂದ ಉಲ್ಲೇಖಿಸಲ್ಪಟ್ಟಿರುವ ಗ್ಲೋಬಲ್ ಟೀಚರ್ ಪ್ರೈಸ್, ಪ್ರಪಂಚದಾದ್ಯಂತ ಶಿಕ್ಷಕರ ಉತ್ತಮ ಕೆಲಸಕ್ಕೆ ಮನ್ನಣೆಯನ್ನು ನೀಡುತ್ತಿದೆ. ಡಿಸಲೆ ತನ್ನ ವಿಜೇತ ಭಾಷಣದಲ್ಲಿ ತನ್ನ ಒಂಬತ್ತು ಸಹವರ್ತಿ ಫೈನಲಿಸ್ಟ್‌ಗಳೊಂದಿಗೆ ಅರ್ಧದಷ್ಟು ಬಹುಮಾನದ ಹಣವನ್ನು ಹಂಚಿಕೊಳ್ಳುವುದಾಗಿ ಹೇಳಿದರು. ಅವರು ಶೈಕ್ಷಣಿಕ ಕಾರ್ಯಕ್ರಮಗಳ ಸಲಹೆಗಾರರಾಗಿ ವಿಶ್ವ ಬ್ಯಾಂಕ್‌ನೊಂದಿಗೆ ಕೆಲಸ ಮಾಡುತ್ತಿದ್ದಾರೆ. == ಆರಂಭಿಕ ಜೀವನ ಮತ್ತು ಶಿಕ್ಷಣ == ಡಿಸಲೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಪರಿತೆವಾಡಿ ಗ್ರಾಮದವರು. ಆರಂಭದಲ್ಲಿ ಐಟಿ ಇಂಜಿನಿಯರ್ ಆಗಬೇಕೆಂದು ನಿರ್ಧರಿಸಿ ಎಂಜಿನಿಯರಿಂಗ್ ಕಾಲೇಜಿಗೆ ಸೇರಿಕೊಂಡಿದ್ದರು. ಆದರೆ ಅದು ಅವರಿಗೆ ಸರಿಹೊಂದುವುದಿಲ್ಲವೆಂದಾದಾಗ, ಅವರ ತಂದೆ ಅವರನ್ನು ಶಿಕ್ಷಕರ ತರಬೇತಿ ಕಾರ್ಯಕ್ರಮವನ್ನು ತೆಗೆದುಕೊಳ್ಳುವಂತೆ ಮನವೊಲಿಸಿದರು. ಡಿಸಲೆ ಅವರಿಗೆ ಇದು ಆರಂಭದಲ್ಲಿ ಇಷ್ಟವಿಲ್ಲದಿದ್ದರೂ, ಜಗತ್ತಿನಲ್ಲಿ ನಿಜವಾದ ಬದಲಾವಣೆಯನ್ನು ತರುವರು ಶಿಕ್ಷಕರೆಂದು ಅವರಿಗೆ ಅಲ್ಲಿ ಅರಿವಾಯಿತು. == ವೃತ್ತಿ == ಡಿಸಲೆ ಅವರು ತಮ್ಮ ನವೀನ ಬೋಧನಾ ಕಾರ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ನಿರ್ಮಿಸಿದ ವಿಜ್ಞಾನ ಪ್ರಯೋಗಾಲಯಗಳ ಮೂಲಕ ವೈಜ್ಞಾನಿಕ ಪ್ರಯೋಗಗಳನ್ನು ಮಾಡಿ ತೋರಿಸುತ್ತಾರೆ. ಪ್ರಾಥಮಿಕ ವರ್ಗದ ಪುಸ್ತಕಗಳಿಗೆ ಕೋಡ್‌ಗಳನ್ನು ಸೇರಿಸಿ ಅವರು ವಿದ್ಯಾರ್ಥಿಗಳಿಗೆ ಆಡಿಯೊ ಕವಿತೆಗಳು, ವೀಡಿಯೊ ಉಪನ್ಯಾಸಗಳು, ಕ್ರಿಯಾಯೋಜನೆಗಳು ಮತ್ತು ಕಥೆಗಳಿಗೆ ಕೊಂಡಿಗಳು ದೊರೆಯುವಂತೆ ಮಾಡಿದ್ದಾರೆ. ಪಠ್ಯಪುಸ್ತಕಗಳಲ್ಲಿ ಕ್ಯೂಆರ್ ಕೋಡ್‌ಗಳನ್ನು ಅಳವಡಿಸುವ ಅವರ ಕಲ್ಪನೆಯನ್ನು ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್ ಅಳವಡಿಸಿಕೊಂಡಿದೆ. ಅವರ ಹಳ್ಳಿಯಲ್ಲಿ, ಅವರು ಹದಿಹರೆಯದ ಮಕ್ಕಳ ವಿವಾಹಗಳನ್ನು ತೊಡೆದುಹಾಕಲು ಮತ್ತು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುನ್ನು ಪ್ರೋತ್ಸಾಹಿಸಲು ಪ್ರಚಾರ ಮಾಡಿದ್ದಾರೆ. == ಪ್ರಶಸ್ತಿಗಳು == == ಉಲ್ಲೇಖಗಳು ==